
ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡು ದಶಕಗಳಾದರೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಗದಗ ಜಿಲ್ಲಾಧಿಕಾರಿ ಮತ್ತು ಎಡಿಸಿ ಕಾರುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.
ಮುಂಡರಗಿ ತಾಲೂಕಿನ ಮೇವುಂಡಿ ಹಾಗೂ ತಾಮ್ರಗುಂಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ನೂರಾರು ಎಕರೆ ಜಮೀನು ಕಳೆದುಕೊಂಡು ನ್ಯಾಯಾಲಯದ ಮೊರೆ ಹೋಗಿದ್ದರು.
14 ಪ್ರಕರಣಗಳಲ್ಲಿ ಒಟ್ಟು 12 ಕೋಟಿ ರೂ.ಗೂ ಅಧಿಕ ಪರಿಹಾರ ಬರಬೇಕಿದ್ದು, ಒಂದು ಎಕರೆಗೆ 40 ರಿಂದ 60 ಲಕ್ಷ ರೂ. ಪರಿಹಾರ ನೀಡದ ಕಾರಣ ಜಿಲ್ಲಾಡಳಿತದ ಪೀಠೋಪಕರಣ ಹಾಗೂ ಕಾರುಗಳನ್ನು ಜಪ್ತಿ ಮಾಡಲಾಗಿದೆ.