
ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ 12 ಅಂಕಗಳೊಂದಿಗೆ ಒಟ್ಟಾರೆ ಆರನೇ ಸ್ಥಾನ ಪಡೆಯುವ ಮೂಲಕ ಸೆಪ್ಟೆಂಬರ್ 4 ಮತ್ತು 5ರಂದು ಬ್ರಸೆಲ್ಸ್ನಲ್ಲಿ ನಡೆಯುವ ಡೈಮಂಡ್ ಲೀಗ್ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಈ ಆವೃತ್ತಿಯ ಲೌಸಾನ್ ಡೈಮಂಡ್ ಲೀಗ್ನಲ್ಲಿ ನೀರಜ್ 88.05 ಮೀಟರ್ ದೂರ ಜಾವೆಲಿನ್ ಎಸೆದು ಎರಡನೇ ಸ್ಥಾನ ಗಳಿಸಿದ್ದರು.
ಫೈನಲ್ನಲ್ಲಿ ಶ್ರೀಲಂಕಾದ ರಮೇಶ್ ತರಂಗ ಪತಿರಾಜ್ ಸೇರಿದಂತೆ ವಿಶ್ವದ ಅಗ್ರ ಆರು ಜಾವೆಲಿನ್ ಎಸೆತಗಾರರು ಪ್ರಶಸ್ತಿಗಾಗಿ ಸೆಣಸಲಿದ್ದು, ಇದು ಏಷ್ಯನ್ ಕ್ರೀಡಾಕೂಟಕ್ಕೆ ಉತ್ತಮ ಸಿದ್ಧತೆಯಾಗಿದೆ.