
ಮಹಾರಾಷ್ಟ್ರದಲ್ಲಿ ಕೃಷಿ ಸಾಲ ಮನ್ನಾ, ಬರ ಪರಿಹಾರ ಮತ್ತು ಬೆಳೆ ಹಾನಿ ನಷ್ಟ ಪರಿಹಾರ ಒದಗಿಸುವಂತೆ ಒತ್ತಾಯಿಸಿ 12,000ಕ್ಕೂ ಹೆಚ್ಚು ರೈತರು ಮುಂಬೈ ಕಡೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದಾರೆ.
ವಿವಿಧ ರೈತ ಸಂಘಟನೆಗಳು ಹಾಗೂ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಆರಂಭವಾಗಿರುವ ಈ ಪಾದಯಾತ್ರೆಯಲ್ಲಿ ರೈತರು ಕೆಂಪು ಬಾವುಟಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಬ್ಯಾಂಕ್ ಸಾಲಗಳ ಸಂಪೂರ್ಣ ಮನ್ನಾ, ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಎಂಎಸ್ಪಿ ನಿಗದಿ ಹಾಗೂ ಬುಡಕಟ್ಟು ರೈತರಿಗೆ ಭೂಮಿ ಹಕ್ಕುಪತ್ರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.