Indian Politics
ಉತ್ತರ ಪ್ರದೇಶ: ಶಾಲಾ ಮಕ್ಕಳ ಕಣ್ಣೆದುರೇ ಶಿಕ್ಷಕಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿ

ಉತ್ತರ ಪ್ರದೇಶ: ಶಾಲಾ ಮಕ್ಕಳ ಕಣ್ಣೆದುರೇ ಶಿಕ್ಷಕಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿ

tv9kannada55m
THE BRIEF
1

ಉತ್ತರ ಪ್ರದೇಶದ ಲಖಿಂಪುರ ಖೇರಿಯ ಚಿಲ್ಡ್ರನ್ಸ್ ಅಕಾಡೆಮಿ ಶಾಲೆಯಲ್ಲಿ 26 ವರ್ಷದ ಶಿಕ್ಷಕಿ ನಿಷಾತ್ ಫಾತಿಮಾ ಅವರನ್ನು ಶಾಲೆಯ ಆವರಣದಲ್ಲಿ ಮೊಹಮ್ಮದ್ ಸೌದ್ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

2

ಬೆಳಿಗ್ಗೆ 11.30ರ ಸುಮಾರಿಗೆ ಶಾಲೆಯ ಕಾರಿಡಾರ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಸೌದ್ ತನ್ನ ಚೀಲದಲ್ಲಿದ್ದ ಗನ್‌ನಿಂದ ಫಾತಿಮಾ ಅವರಿಗೆ ಗುಂಡಿಕ್ಕಿ, ನಂತರ ತನಗೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

3

ಪೊಲೀಸರು ಸ್ಥಳಕ್ಕೆ ಆಗಮಿಸಿ ಶಾಲಾ ಆವರಣವನ್ನು ವಶಕ್ಕೆ ಪಡೆದಿದ್ದು, ವಿಧಿವಿಜ್ಞಾನ ತಜ್ಞರ ತಂಡ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು ಕೊಲೆಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.