
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ, ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ ಕುಮಾರ್ ಪರವಾಗಿ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅಕ್ರಮದ ಹಣದಿಂದ ಐಷಾರಾಮಿ ಖರ್ಚುಗಳನ್ನು ಭರಿಸಿದ್ದು ತನಿಖೆಯಿಂದ ಬಯಲಾಗಿದೆ.
ಜ್ಞಾನೇಂದ್ ಕುಮಾರ್ ಗೆಳತಿಗಾಗಿ ಮಾರ್ಚ್ ಹಾಗೂ ಜೂನ್ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಡೈಮಂಡ್ ಖರೀದಿಸಿರುವುದು ನ್ಯಾಯಾಲಯಕ್ಕೆ ಸಲ್ಲಿಸಿದ ಆಕ್ಷೇಪಣೆಯಿಂದ ತಿಳಿದುಬಂದಿದೆ.
ಪರೀಕ್ಷೆಯಲ್ಲಿ ಹುದ್ದೆ ಕೊಡಿಸುವುದಾಗಿ ಹೇಳಿ 11 ಮಂದಿ ಆಕಾಂಕ್ಷಿಗಳಿಂದ ಸುಮಾರು 60 ರಿಂದ 70 ಲಕ್ಷ ರೂ.ಗಳನ್ನು ಸಂಗ್ರಹಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.