
ಕೊಲ್ಕತ್ತಾದ ದುರ್ಗಾ ಪೂಜಾ ಪೆಂಡಾಲ್ ಒಂದಕ್ಕೆ ಭೇಟಿ ನೀಡಿದ್ದ ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ದೇವಿಯ ಮೂರ್ತಿ ಕಂಡು ಭಾವುಕರಾದರು.
ದೇವಿಯ ಎದುರು ಕೈಮುಗಿದು ನಿಂತ ಅವರು 'ಮಾ, ಮಾ' ಎಂದು ಜೋರಾಗಿ ಉದ್ಗರಿಸುತ್ತಾ ಕಣ್ಣೀರಿಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂಸದರು ಹಠಾತ್ತನೆ ಅಳಲು ತೊಡಗಿದ್ದನ್ನು ಕಂಡು ಪಕ್ಕದಲ್ಲಿದ್ದ ಬೆಂಬಲಿಗರು ಹಾಗೂ ಪೂಜಾ ಸಮಿತಿಯ ಸದಸ್ಯರು ಅವರಿಗೆ ನೀರು ನೀಡಿ ಸಮಾಧಾನಪಡಿಸಿದರು.