
ಬಿಗ್ ಬಾಸ್ ಕನ್ನಡ ಸೀಸನ್ 13ರ ಪ್ರೀ ಲಾಂಚ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಸಾಮಾನ್ಯರ ಆಯ್ಕೆಗಾಗಿ ನಡೆಸುತ್ತಿರುವ ಅಗ್ನಿಪರೀಕ್ಷೆ ಟಾಸ್ಕ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ವಿನಯ್, ಚಂದನ್, ಸಂಗೀತ ಮತ್ತು ಶ್ರುತಿ ಜಡ್ಜ್‌ಗಳಾಗಿರುವ ಈ ಪ್ರಕ್ರಿಯೆಯಲ್ಲಿ ಕಠಿಣತೆ ಇದ್ದರೂ, ಅಗ್ನಿಪರೀಕ್ಷೆ ದಾಟಿದವರು ಮಾತ್ರ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಕಾಣಲು ಸಾಧ್ಯ ಎಂದಿದ್ದಾರೆ.
ಅಗ್ನಿಪರೀಕ್ಷೆಯ ಕಠಿಣತೆ ಬಗ್ಗೆ ಕೇಳಿಬಂದ ಟೀಕೆಗಳಿಗೆ ಉತ್ತರಿಸಿದ ಸುದೀಪ್, ಜೀವನದ ಕಠಿಣ ಸವಾಲುಗಳನ್ನು ಎದುರಿಸುವವರು ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.