
ಭಾರತೀಯ ಕ್ರಿಕೆಟ್ ತಂಡದ ದಿವಂಗತ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ (ಟೈಗರ್ ಪಟೌಡಿ) ಅವರ ಪುತ್ರಿ ಸಬಾ ಅಲಿ ಪಟೌಡಿ, ತಂದೆಯಿಂದ ಕಲಿತ ಜೀವನದ ಪಾಠಗಳನ್ನು ಹಂಚಿಕೊಂಡಿದ್ದಾರೆ.
ಭೋಪಾಲ್ನಲ್ಲಿರುವ 1,000 ಕೋಟಿ ರೂ.ಗೂ ಅಧಿಕ ಮೌಲ್ಯದ ಕುಟುಂಬದ ಆಸ್ತಿ ಮತ್ತು ಪರಂಪರೆಯ ಜವಾಬ್ದಾರಿಯನ್ನು ಸಬಾ ಅಲಿ ಪಟೌಡಿ ವಹಿಸಿಕೊಂಡಿದ್ದಾರೆ.
ಔಕಾಫ್-ಎ-ಶಾಹಿ ಟ್ರಸ್ಟ್ ಅಡಿಯಲ್ಲಿ ಬರುವ ಸ್ಮಾರಕಗಳು, ಮಸೀದಿಗಳು ಹಾಗೂ ಮಕ್ಕಾ-ಮದೀನಾದ ರುಬಾತ್ಗಳ ನಿರ್ವಹಣೆಯ ಜವಾಬ್ದಾರಿಯನ್ನು ಅವರು ನಿರ್ವಹಿಸುತ್ತಿದ್ದಾರೆ.