
ನೇಪಾಳದ ತ್ರಿಭುವನ್ ತ್ರಿಶೂಲಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ದಾವಾಡಿ, ಪ್ರವಾಹದ ಮುನ್ಸೂಚನೆ ಅರಿತು ಗಂಟೆ ಬಾರಿಸುವ ಮೂಲಕ 1,643 ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.
ಬುಧವಾರ ಬೆಳಗ್ಗೆ 9.20ಕ್ಕೆ ಎಚ್ಚರಿಕೆ ಪಡೆದ ದಾವಾಡಿ, ಮಕ್ಕಳನ್ನು ಬೆಟ್ಟದ ಮೇಲಿದ್ದ ಬೋಧಿ ಮರದ ಬಳಿ ಕರೆದೊಯ್ದ ಕೆಲವೇ ಕ್ಷಣಗಳಲ್ಲಿ ಶಾಲಾ ಕಟ್ಟಡವು ನೀರಿನ ರಭಸಕ್ಕೆ ಕೊಚ್ಚಿಹೋಯಿತು.
ಈ ದುರಂತದಲ್ಲಿ ಶಾಲೆಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದು, ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ದೇಶದಲ್ಲಿ ಒಟ್ಟು 788 ಮೃತದೇಹಗಳನ್ನು ಹೊರತೆಗೆಯಲಾಗಿದೆ.