
ಬೆಂಗಳೂರಿನ ಉದ್ಯೋಗಿಯೊಬ್ಬರಿಗೆ ಹೊಸ ಮ್ಯಾನೇಜರ್ ಬಂದ ಬಳಿಕ ಸಂಬಳ ಹೆಚ್ಚಾಗಿದೆ ಎಂಬ ಕಾರಣ ನೀಡಿ ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿರುವ ಘಟನೆ ವರದಿಯಾಗಿದೆ.
ಉದ್ಯೋಗಿಯ ಪ್ರಸ್ತುತ ಸಂಬಳ ಅಧಿಕವಾಗಿದ್ದು, ಕಂಪನಿಯ ಬಜೆಟ್‌ನಲ್ಲಿ ಆ ಮೊತ್ತವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬುದು ಮ್ಯಾನೇಜರ್ ವರ್ತನೆಗೆ ಕಾರಣವೆಂದು ರೆಡ್ಡಿಟ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಈ ಸಮಸ್ಯೆ ಕುರಿತು ಉದ್ಯೋಗಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಬೇರೆ ಉದ್ಯೋಗ ಹುಡುಕಲು ಅಥವಾ ಎಚ್‌ಆರ್ ಗಮನಕ್ಕೆ ತರಲು ಸಲಹೆ ನೀಡಿ ಧೈರ್ಯ ತುಂಬಿದ್ದಾರೆ.