
ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೃಹಿಣಿಯೊಬ್ಬರ ಕುಟುಂಬಕ್ಕೆ ಬರೋಬ್ಬರಿ 59.69 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹೈಕೋರ್ಟ್ ವಿಮಾ ಕಂಪನಿಗೆ ಮಹತ್ವದ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ ತೀರ್ಪಿನಂತೆ ಗೃಹಿಣಿಯ ಮಾಸಿಕ ಆದಾಯವನ್ನು 30,000 ರೂ. ಎಂದು ಪರಿಗಣಿಸಿ, ಭವಿಷ್ಯದ ಗಳಿಕೆಯ ಶೇ.40ರಷ್ಟು ಸೇರಿಸಿ ಈ ಮೊತ್ತವನ್ನು ವಾರ್ಷಿಕ ಶೇ.9ರಷ್ಟು ಬಡ್ಡಿಯೊಂದಿಗೆ ನೀಡಲು ನಿರ್ದೇಶಿಸಲಾಗಿದೆ.
2011ರ ಆಗಸ್ಟ್ 23ರಂದು ಬಿದಡಿ ಸಮೀಪ ಸಂಭವಿಸಿದ ಅಪಘಾತದಲ್ಲಿ ಪುಷ್ಪಾ ಅವರು ಮೃತಪಟ್ಟಿದ್ದು, ಈ ಮೊದಲು ನ್ಯಾಯಾಧಿಕರಣವು 11.18 ಲಕ್ಷ ರೂ. ಪರಿಹಾರ ಘೋಷಿಸಿತ್ತು.