
ಡೀಸೆಲ್ ದರ ಲೀಟರ್‌ಗೆ 8 ರೂಪಾಯಿ ಏರಿಕೆಯಾಗಿರುವುದರಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ತಿಂಗಳಿಗೆ 40 ಕೋಟಿ ರೂಪಾಯಿ ನಷ್ಟವಾಗುತ್ತಿದೆ.
ನಷ್ಟದಿಂದ ಪಾರಾಗಲು ಕೆಎಸ್‌ಆರ್‌ಟಿಸಿ 33% ಮತ್ತು ಬಿಎಂಟಿಸಿ 44% ದರ ಏರಿಕೆಗೆ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿವೆ.
ದರ ಏರಿಕೆ ಬಗ್ಗೆ ಶಿಫಾರಸು ಮಾಡಲು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿದೆ.