
ಸೌತ್ ಆಫ್ರಿಕಾದ ಯುವ ಬ್ಯಾಟರ್ ಲುಹಾನ್-ಡ್ರೆ ಪ್ರಿಟೋರಿಯಸ್ ಸೌತ್ ಆಫ್ರಿಕಾ ಟಿ20 ಚಾಲೆಂಜ್ ಪಂದ್ಯದಲ್ಲಿ ನೈಟ್ಸ್ ವಿರುದ್ಧ ಕೇವಲ 79 ಎಸೆತಗಳಲ್ಲಿ ಅಜೇಯ 188 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಈ ಅಸಾಧಾರಣ ಇನಿಂಗ್ಸ್ನಲ್ಲಿ ಅವರು ಕೇವಲ 40 ಎಸೆತಗಳಲ್ಲಿ ಶತಕ ಪೂರೈಸುವುದರ ಜೊತೆಗೆ 13 ಭರ್ಜರಿ ಸಿಕ್ಸರ್ ಹಾಗೂ 15 ಬೌಂಡರಿಗಳನ್ನು ಸಿಡಿಸಿ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 267 ರನ್ ಗಳಿಸಲು ನೆರವಾದರು.
ಇದಕ್ಕೂ ಮುನ್ನ 2013ರ ಐಪಿಎಲ್ನಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ ಬಾರಿಸಿದ್ದ ಅಜೇಯ 175 ರನ್ಗಳ ಟಿ20 ಕ್ರಿಕೆಟ್ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನು 13 ವರ್ಷಗಳ ಬಳಿಕ ಈ ಯುವ ಆಟಗಾರ ಮುರಿದರು.