
ಭಾರತದಲ್ಲಿ ಸುಮಾರು 35.4% ಮಕ್ಕಳಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಕಂಡುಬರುತ್ತಿದ್ದು, ಬೊಜ್ಜು ಹೊಂದಿರುವ ಮಕ್ಕಳಲ್ಲಿ ಈ ಪ್ರಮಾಣವು 63.4% ಕ್ಕೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ.
ಅಧ್ಯಯನಗಳ ಪ್ರಕಾರ, ಭಾರತದ ವಯಸ್ಕರಲ್ಲಿ NAFLD ಪ್ರಮಾಣ 38.6% ಇದ್ದು, ಡಯಾಬಿಟಿಸ್ ಅಥವಾ ಬೊಜ್ಜು ಇರುವವರಲ್ಲಿ ಇದು 52.8% ರಷ್ಟು ಹೆಚ್ಚಾಗಿದೆ.
ಪೋಷಕರು ಮಕ್ಕಳ ದೈಹಿಕ ಚಟುವಟಿಕೆ, ಹೊರಾಂಗಣ ಆಟಗಳು ಮತ್ತು ಸಮತೋಲಿತ ಆಹಾರ ಪದ್ಧತಿಯನ್ನು ಉತ್ತೇಜಿಸುವ ಮೂಲಕ ಈ ಮೆಟಾಬಾಲಿಕ್ ಸಮಸ್ಯೆಯನ್ನು ತಡೆಯಲು ಗಮನ ಹರಿಸಬೇಕು.