
ಸೆಪ್ಟೆಂಬರ್ 1ರಿಂದ ಭಾರತದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇಮಿಗ್ರೇಷನ್ ಕೌಂಟರ್ಗಳಲ್ಲಿ ಬೋರ್ಡಿಂಗ್ ಪಾಸ್ಗಳ ಮೇಲೆ ಸೀಲು ಹಾಕುವ ಕಡ್ಡಾಯ ನಿಯಮವನ್ನು ರದ್ದುಗೊಳಿಸಲಾಗಿದೆ.
ಬ್ಯೂರೋ ಆಫ್ ಇಮಿಗ್ರೇಷನ್ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು, ಪ್ರಯಾಣಿಕರು ಇಮಿಗ್ರೇಷನ್ ತಪಾಸಣೆ ವೇಳೆ ಡಿಜಿಟಲ್ ಇ-ಬೋರ್ಡಿಂಗ್ ಪಾಸ್ಗಳನ್ನು ನೇರವಾಗಿ ತೋರಿಸಬಹುದು.
ಭೌತಿಕ ಬೋರ್ಡಿಂಗ್ ಪಾಸ್ ಬಳಸುವ ಪ್ರಯಾಣಿಕರಿಗೆ ಅವಕಾಶವಿದ್ದರೂ, ಇನ್ಮುಂದೆ ಅಧಿಕಾರಿಗಳು ಅವುಗಳ ಮೇಲೆ ಸೀಲು ಹಾಕುವುದಿಲ್ಲ, ಇದರಿಂದ ಇಮಿಗ್ರೇಷನ್ ಪ್ರಕ್ರಿಯೆ ವೇಗವಾಗಲಿದೆ.