
ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಗ್ರಾಹಕರು ಆಗಸ್ಟ್ 16ರೊಳಗೆ ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
ಗಡುವು ಮೀರಿದಲ್ಲಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ಸಿಲಿಂಡರ್ ಖರೀದಿಸಲು ಸಾಧ್ಯವಾಗುವುದಿಲ್ಲ ಮತ್ತು ಸಬ್ಸಿಡಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ತೈಲ ಕಂಪನಿಗಳು ಎಚ್ಚರಿಸಿವೆ.
ದೇಶಾದ್ಯಂತ ಗ್ರಾಹಕರಿಗೆ ಅಂತಿಮ ಎಸ್ಎಂಎಸ್ ಕಳುಹಿಸಲಾಗುತ್ತಿದ್ದು, ಇನ್ನು ಕೇವಲ ಎರಡು ವಾರಗಳ ಕಾಲಾವಕಾಶ ಮಾತ್ರ ಬಾಕಿ ಉಳಿದಿದೆ.