
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಪ್ರಧಾನಿ ಮೋದಿ ಭಾಗವಹಿಸಬೇಕಿದ್ದ ಕಾರ್ಯಕ್ರಮದ ಆವರಣಕ್ಕೆ ನಕಲಿ ಐಡಿ ಬಳಸಿ ನುಗ್ಗಲು ಯತ್ನಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಲ್ಲಿ 24 ವರ್ಷದ ರೋಹನ್ ಪಾರೇಖ್ ಪ್ರಧಾನಿ ಕಚೇರಿಯ ನಕಲಿ ಐಡಿ ಕಾರ್ಡ್ ಹೊಂದಿದ್ದರೆ, ಆತನ ಜೊತೆಗಿದ್ದ ಬಾಡಿಗಾರ್ಡ್ ಬಳಿ ಲೈಸೆನ್ಸ್ ಇರುವ ಬಂದೂಕು ಪತ್ತೆಯಾಗಿದೆ.
ಘಟನೆಯ ಗಂಭೀರತೆಯನ್ನು ಪರಿಗಣಿಸಿ ಮುಂಬೈ ಕ್ರೈಮ್ ಬ್ರಾಂಚ್ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಶಂಕಿತರ ಹಿನ್ನೆಲೆ ಮತ್ತು ಹೈ-ಪ್ರೊಫೈಲ್ ವಲಯಕ್ಕೆ ನುಗ್ಗಲು ಇದ್ದ ಉದ್ದೇಶದ ಬಗ್ಗೆ ವಿಚಾರಣೆ ನಡೆಸುತ್ತಿದೆ.