
ನಟ ಧನ್ವೀರ್ ವಿರುದ್ಧ ನಟ ದರ್ಶನ್ ಪರವಾಗಿ ನ್ಯಾಯಾಲಯಕ್ಕೆ ಸ್ಟೇ ಅರ್ಜಿ ಸಲ್ಲಿಸಲಾಗಿದೆ ಎಂದು ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ ತಿಳಿಸಿದ್ದಾರೆ.
ಕಳೆದ 4-5 ದಿನಗಳಿಂದ ದರ್ಶನ್ ಅವರ ಕುಟುಂಬದ ತೇಜೋವಧೆ ಆಗುತ್ತಿರುವುದರಿಂದ ಈ ಅರ್ಜಿ ಹಾಕಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದರ್ಶನ್ ಅವರ ಹೆಸರು ಮತ್ತು ಅಭಿಮಾನಿ ಬಳಗದ ದುರ್ಬಳಕೆ ಮಾಡಿಕೊಂಡು ಧನ್ವೀರ್ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.