
ಭಾರತೀಯ ರಿಸರ್ವ್ ಬ್ಯಾಂಕ್ (RBI) ಠೇವಣಿ ಬಡ್ಡಿದರದ ನಿರ್ದೇಶನಗಳು, 2026ರ ಅಡಿಯಲ್ಲಿ ಹೊಸ ನಿಯಮಗಳನ್ನು ಪರಿಷ್ಕರಿಸಿದ್ದು, ಇವು 2026ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.
ಹೊಸ ನಿಯಮದಂತೆ, ಬ್ಯಾಂಕ್ಗಳು ಒಂದೇ ದಿನದಂದು ಸ್ವೀಕರಿಸುವ ಒಂದೇ ರೀತಿಯ ಠೇವಣಿಗಳಿಗೆ (ಸಮಾನ ಮೊತ್ತ ಮತ್ತು ಅವಧಿ) ತಮ್ಮ ಎಲ್ಲಾ ಶಾಖೆಗಳಲ್ಲಿ ಒಂದೇ ರೀತಿಯ ಬಡ್ಡಿದರವನ್ನು ನೀಡಬೇಕು.
₹2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಬೃಹತ್ ಠೇವಣಿಗಳಿಗೆ ಬ್ಯಾಂಕ್ಗಳು ಲಿಕ್ವಿಡಿಟಿ ಕವರೇಜ್ ರೇಶಿಯೋ (LCR) ಚೌಕಟ್ಟನ್ನು ಆಧರಿಸಿ ಪ್ರತ್ಯೇಕ ಬಡ್ಡಿದರಗಳನ್ನು ನಿಗದಿಪಡಿಸಲು ಆರ್ಬಿಐ ಅವಕಾಶ ನೀಡಿದೆ.