
ಸರ್ಕಾರದ 100 ದಿನಗಳ ಪೂರೈಕೆ ಹಿನ್ನೆಲೆಯಲ್ಲಿ ರೈತರಿಗಾಗಿ ನೇಗಿಲ ಯೋಜನೆ, ತೇಗ ಸಿರಿ ಯೋಜನೆ ಮತ್ತು ಬಡವರಿಗಾಗಿ ಉಚಿತ ನಿವೇಶನ ಯೋಜನೆಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ.
ನೇಗಿಲ ಯೋಜನೆಯಡಿ 3 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸುಮಾರು 59 ಲಕ್ಷ ಸಣ್ಣ ರೈತರ ಜಮೀನನ್ನು ಸರ್ಕಾರದ ವೆಚ್ಚದಲ್ಲಿ ಉಳುಮೆ ಮಾಡಿಕೊಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ತೇಗ ಸಿರಿ ಯೋಜನೆಗಾಗಿ 493 ಕೋಟಿ ರೂ. ಮೀಸಲಿಡಲಾಗಿದ್ದು, ರಸ್ತೆ ಬದಿಯ ಜಮೀನುಗಳಲ್ಲಿ ತೇಗದ ಮರ ಬೆಳೆಸುವ ರೈತರಿಗೆ ಮರ ಕಟಾವು ಮಾಡಿದಾಗ ಶೇ. 70ರಷ್ಟು ಆದಾಯ ಸಿಗಲಿದೆ.