
ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ರಾಯಚೂರು, ಕಲಬುರಗಿ ಮತ್ತು ಬೆಂಗಳೂರು ಸೇರಿದಂತೆ 15ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ.
ನೇಮಕಗೊಂಡ ಅಭ್ಯರ್ಥಿ ಸುಗುರೇಶ್ ಅವರ ತಂದೆ ಸತೀಶ್ ಬಾಬು ಅವರ ಮೊಬೈಲ್ ಫೋನ್ ಅನ್ನು ಇಡಿ ಜಪ್ತಿ ಮಾಡಿದ್ದು, ಪಿಎಂಎಲ್ಎ ಕಾಯ್ದೆಯಡಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ರಾಯಚೂರಿನ ದೇವದುರ್ಗ ತಾಲ್ಲೂಕಿನ ಶಾವಂತಗೇರಾ ಗ್ರಾಮದಲ್ಲಿರುವ ಸುಗುರೇಶ್ ಅವರ ಕುಟುಂಬದ ನಿವಾಸದ ಮೇಲೆ ನಡೆದ ದಾಳಿಯ ನಂತರ, ಕುಟುಂಬಸ್ಥರು ತಮಗೆ ಹಗರಣಕ್ಕೂ ಸಂಬಂಧವಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.