
ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ತಮ್ಮ ‘ಮಾರ್ಟಿನ್’ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡದಿದ್ದಾಗ ಎದುರಿಸಿದ ಪರಿಸ್ಥಿತಿಯನ್ನು ನಿರ್ಮಾಪಕ ಉದಯ್ ಮೆಹ್ತಾ ನೆನಪಿಸಿಕೊಂಡಿದ್ದಾರೆ.
ತೆಲುಗಿನ ‘ಪ್ಯಾರಡೈಸ್’ ಸಿನಿಮಾ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ತಮ್ಮ ಸಿನಿಮಾ ನೋಡಲು ಹೋಗುತ್ತಿದ್ದ ಜನರನ್ನು ತಡೆದಿದ್ದರಿಂದ ತಮಗೆ ನಷ್ಟವಾಯಿತು ಎಂದು ಅವರು ತಿಳಿಸಿದ್ದಾರೆ.
ತಮ್ಮ 18 ವರ್ಷಗಳ ವೃತ್ತಿಜೀವನದಲ್ಲಿ ಒಟ್ಟು 9 ಸಿನಿಮಾ ಮಾಡಿದ್ದು, ಅದರಲ್ಲಿ 6 ಸಿನಿಮಾ ಹಿಟ್ ಆಗಿವೆ ಎಂದು ಉದಯ್ ಮೆಹ್ತಾ ಸ್ಪಷ್ಟಪಡಿಸಿದ್ದಾರೆ.