Economy
ತುಮಕೂರಿನಲ್ಲಿ ₹5,000 ಕೋಟಿ ವೆಚ್ಚದ ಸೋಲಾರ್ ಘಟಕ

ತುಮಕೂರಿನಲ್ಲಿ ₹5,000 ಕೋಟಿ ವೆಚ್ಚದ ಸೋಲಾರ್ ಘಟಕ

oneindia1h
THE BRIEF
1

ತುಮಕೂರಿನ ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ (ಸಿಬಿಐಸಿ) ಪ್ರದೇಶದಲ್ಲಿ 5,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲು ರೆನೈಸಾನ್ಸ್ ಸೋಲಾರ್ ಅಂಡ್ ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಕಂಪನಿ ಮುಂದಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

2

ಕಂಪನಿಯು 5 ಗಿಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಇನ್-ಗಾಟ್ ಮತ್ತು ವೇಫರ್ ತಯಾರಿಕಾ ಘಟಕ ಸ್ಥಾಪನೆಗಾಗಿ 100 ಎಕರೆ ಜಾಗವನ್ನು ಕೋರಿದ್ದು, 80 ಮೆಗಾವ್ಯಾಟ್ ವಿದ್ಯುತ್ ಹಾಗೂ 1 ಕೋಟಿ ಎಂಎಲ್‌ಡಿ ನೀರು ಒದಗಿಸುವಂತೆ ಬೇಡಿಕೆ ಇಟ್ಟಿದೆ.

3

ಎಲ್ಲವೂ ನಿರೀಕ್ಷೆಯಂತೆ ನಡೆದರೆ 2028ರ ಮಧ್ಯಭಾಗದ ವೇಳೆಗೆ ಈ ಘಟಕದಲ್ಲಿ ತಯಾರಿಕಾ ಚಟುವಟಿಕೆಗಳು ಆರಂಭಗೊಳ್ಳಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.