ನೀಟ್ ಅಕ್ರಮದ ವಿರುದ್ಧ ನಡೆದ ಪ್ರತಿಭಟನೆಯ ವಿಡಿಯೋಗಳನ್ನು ಪರಿಶೀಲಿಸಿದ ದೆಹಲಿ ಪೊಲೀಸರು, ಸುಮಾರು 3,000ಕ್ಕೂ ಹೆಚ್ಚು ಅಪರಾಧಿಕ ಹಿನ್ನೆಲೆಯುಳ್ಳ ವ್ಯಕ್ತಿಗಳು ಭಾಗವಹಿಸಿರುವುದನ್ನು ಫೇಶಿಯಲ್ ಸ್ಕ್ಯಾನ್ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಿದ್ದಾರೆ.
ಗುರುತಿಸಲಾದವರಲ್ಲಿ 101 ಕೊಲೆ ಪ್ರಕರಣ, 62 ಕೊಲೆಯತ್ನ, 284 ದರೋಡೆ, 61 ಅತ್ಯಾಚಾರ ಮತ್ತು 19 ಅಪಹರಣ ಪ್ರಕರಣಗಳಲ್ಲಿ ಬೇಕಾದ ಆರೋಪಿಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯದಿದ್ದರೆ ಜುಲೈ 28ರಿಂದ ಮತ್ತೆ ಧರಣಿ ನಡೆಸುವುದಾಗಿ ಸಿಜೆಪಿ ವಕ್ತಾರ ಅಶತೋಷ್ ರಂಕಾ ಎಚ್ಚರಿಕೆ ನೀಡಿದ್ದಾರೆ.