
ದಕ್ಷಿಣ ಕೊರಿಯಾ ಸರ್ಕಾರವು ತನ್ನ ದೇಶದ ಎಲ್ಲಾ ನಾಗರಿಕರಿಗೆ ಉಚಿತವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಒದಗಿಸುವ 'AI for All' ಬೀಟಾ ಯೋಜನೆಯನ್ನು ಸೆಪ್ಟೆಂಬರ್ನಲ್ಲಿ ಆರಂಭಿಸುತ್ತಿದೆ.
ಈ ಯೋಜನೆಗಾಗಿ ಸರ್ಕಾರವು ಮೂರು ತಂತ್ರಜ್ಞಾನ ಗುಂಪುಗಳನ್ನು ಆಯ್ಕೆ ಮಾಡುತ್ತಿದ್ದು, ವರ್ಷಾಂತ್ಯದೊಳಗೆ ಪೂರ್ಣಪ್ರಮಾಣದಲ್ಲಿ ಎಐ ಸೇವೆಗಳನ್ನು ಜಾರಿಗೆ ತರಲು ನಿರ್ಧರಿಸಿದೆ.
ವೈದ್ಯರ ಅಪಾಯಿಂಟ್ಮೆಂಟ್, ತೆರಿಗೆ ಎಣಿಕೆ ಮತ್ತು ಶಿಕ್ಷಣದಂತಹ ಸರ್ಕಾರಿ ಸೇವೆಗಳನ್ನು ಸುಲಭಗೊಳಿಸಲು ಸ್ವದೇಶಿ ಭಾಷಾ ಮಾದರಿಗಳನ್ನು ಬಳಸಿಕೊಂಡು ಈ ಎಐ ಆ್ಯಪ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.