
ಗಾಯಕ ನವೀನ್ ಸಜ್ಜು ಅವರು ‘ಸುಬ್ಬ ನಿಮ್ಮಲೊಬ್ಬ’ ಎಂಬ ಹೊಸ ಸಿನಿಮಾ ಮೂಲಕ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದು, ಶ್ರೀ ವಿನಯ್ ಗುರೂಜಿ ಅವರ ಅಮೃತಹಸ್ತದಿಂದ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ.
ಯುನಿಕ್ ಪ್ರೊಡಕ್ಷನ್ಸ್ ಎಲ್ಎಲ್ಪಿ ಅಡಿಯಲ್ಲಿ ಎಸ್.ಟಿ. ಉದಯ್ ಕುಮಾರ್ ಮತ್ತು ಅರುಣ್ ಕುಮಾರ್ ಸಿ. ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ವಿನಯ್ ಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚಿಕ್ಕಮಗಳೂರು ಮೂಲದ ನಟಿ ಶ್ರುತಿ ಗೌಡ ನಾಯಕಿಯಾಗಿ ನಟಿಸುತ್ತಿದ್ದು, ಇದು ಸಾಮಾನ್ಯ ಮಧ್ಯಮ ವರ್ಗದ ಕನ್ನಡಿಗ ಲಾರಿ ಚಾಲಕನ ಬದುಕಿನ ಸುತ್ತ ಹೆಣೆಯಲಾದ ಅಸಾಮಾನ್ಯ ಹೋರಾಟದ ಕಥೆಯಾಗಿದೆ.