
ರಾಜ್ಯದಲ್ಲಿ ಮಳೆ ಕೊರತೆಯಿಂದ ಭತ್ತದ ಬಿತ್ತನೆ ಕುಂಠಿತಗೊಂಡಿದ್ದು, ಕಳೆದ ಒಂದು ದಶಕದಲ್ಲೇ ಕಾಣದಂತೆ ಅಕ್ಕಿ ದರದಲ್ಲಿ ಶೇ. 35ರಷ್ಟು ಭಾರಿ ಏರಿಕೆ ಕಂಡುಬಂದಿದೆ.
ಸೋನಾ ಸ್ಟೀಮ್ ಅಕ್ಕಿ ಕೆಜಿಗೆ 46 ರೂಪಾಯಿಯಿಂದ 64 ರೂಪಾಯಿಗೆ ಮತ್ತು ಸೋನಾ ಮಸೂರಿ ರಾ ಅಕ್ಕಿ 54 ರೂಪಾಯಿಯಿಂದ 70 ರೂಪಾಯಿಗೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸುಮಾರು ಶೇ. 50ರಷ್ಟು ಮಳೆ ಕೊರತೆಯಾಗಿರುವುದರಿಂದ ಉತ್ಪಾದನೆ ಕುಸಿತದ ಆತಂಕವಿದ್ದು, ಹಿಂಗಾರು ಮಳೆಯೂ ಕೈಕೊಟ್ಟರೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.