
1976ರಲ್ಲಿ ಕೇವಲ 1.87 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಆರಂಭವಾದ ಎಚ್ಸಿಎಲ್ ಸಂಸ್ಥೆಯು ಇದೀಗ 50 ವರ್ಷಗಳನ್ನು ಪೂರೈಸಿ ಜಾಗತಿಕ ಐಟಿ ದಿಗ್ಗಜವಾಗಿ ಬೆಳೆದಿದೆ.
ಆರು ಮಂದಿ ಯುವಕರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಕಾರು ಮಾರಿ ಸಂಗ್ರಹಿಸಿದ ಹಣದಿಂದ ದೆಹಲಿಯ ಸಣ್ಣ ಕೊಠಡಿಯಲ್ಲಿ ಕಂಪನಿಯನ್ನು ಸ್ಥಾಪಿಸಿದ್ದರು.
ಐಐಟಿ ಖರಗ್ಪುರ ಮತ್ತು ಮದ್ರಾಸ್ ಸಂಸ್ಥೆಗಳಿಂದ ಮೊದಲ ಆರ್ಡರ್ ಪಡೆದಿದ್ದ ಎಚ್ಸಿಎಲ್, ಇಂದು ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ವಿಸ್ತಾರಗೊಂಡಿದೆ.