
ಬೆಂಗಳೂರಿನ ಕೆಂಗೇರಿಯ ಕೋನಸಂದ್ರದಲ್ಲಿ ದೇವಸ್ಥಾನದ ಮುಂದೆ ಮಲಗಿದ್ದ 65 ವರ್ಷದ ವೃದ್ಧೆಯ ಮೇಲೆ ಸಾತ್ವಿಕ್ ಎಂಬ 20 ವರ್ಷದ ಯುವಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ.
ಆರೋಪಿಯು ಹಣ ಹಾಗೂ ಚಿನ್ನದ ಉಂಗುರಕ್ಕಾಗಿ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಹೊಡೆತದ ರಭಸಕ್ಕೆ ವೃದ್ಧೆಯ ಎದೆಯ ಮೂಳೆ ಮುರಿದು ಹೋಗಿತ್ತು.
ಸ್ಥಳದಲ್ಲಿದ್ದ ಕ್ಯಾಬ್ ಚಾಲಕನ ಮಾಹಿತಿ ಹಾಗೂ ತನಿಖೆಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಆತನ ವಿರುದ್ಧ ಈ ಹಿಂದೆ ಇತರ ಪ್ರಕರಣಗಳೂ ಇರುವುದು ಪತ್ತೆಯಾಗಿದೆ.