
ಹೈದರಾಬಾದ್ನ ಆರ್ಥೋಪಿಡಿಕ್ ಸರ್ಜನ್ ಡಾ. ಕೆ.ಜೆ. ರೆಡ್ಡಿ ಅವರು ನಟ ಪ್ರಭಾಸ್ ಅವರೊಂದಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಪ್ರಭಾಸ್ ಅವರ ಆರೋಗ್ಯದ ಜವಾಬ್ದಾರಿ ವಹಿಸಿಕೊಂಡಿರುವುದಾಗಿ ವೈದ್ಯರು ತಿಳಿಸಿದ್ದು, ಯಶಸ್ಸಿನ ಹಿಂದೆ ನಟ ಪಟ್ಟಿರುವ ವೈಯಕ್ತಿಕ ತ್ಯಾಗಗಳ ಬಗ್ಗೆ ಉಲ್ಲೇಖಿಸಿರುವುದು ಅಭಿಮಾನಿಗಳ ಕಳವಳಕ್ಕೆ ಕಾರಣವಾಗಿದೆ.
ಪ್ರಭಾಸ್ ಈಗಾಗಲೇ ಮಂಡಿ ನೋವಿನ ಸಮಸ್ಯೆಯಿಂದ ಎರಡು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದು, ಪ್ರಸ್ತುತ 'ಸ್ಪಿರಿಟ್', 'ಫೌಜಿ' ಮತ್ತು 'ಕಲ್ಕಿ 2898 ಎಡಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.