
ಪ್ರತಿಷ್ಠಿತ ಅಡಿಡಾಸ್ ಕಂಪನಿಯು ಭಾರತದ ಗುರಗಾಂವ್ನಲ್ಲಿರುವ ತನ್ನ ಇಂಡಿಯಾ ಟೆಕ್ ಹಬ್ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಸೆಪ್ಟೆಂಬರ್ 15 ರಂದು ದೃಢಪಡಿಸಿದೆ.
ಕಂಪನಿಯ ಈ ಕಠಿಣ ನಿರ್ಧಾರದಿಂದಾಗಿ ಇಲ್ಲಿನ 700 ಉದ್ಯೋಗಿಗಳ ಪೈಕಿ ಸುಮಾರು ಅರ್ಧದಷ್ಟು ಅಂದರೆ 300 ರಿಂದ 350 ಸಾಫ್ಟ್ವೇರ್ ಇಂಜಿನಿಯರ್ ಹಾಗೂ ಡೇಟಾ ವಿಜ್ಞಾನಿಗಳ ಮೇಲೆ ಪರಿಣಾಮ ಬೀರಲಿದೆ.
ಕಾರ್ಯಪಡೆಯನ್ನು ಸರಳಗೊಳಿಸಲು ಮತ್ತು ಬದಲಾಗುತ್ತಿರುವ ವ್ಯವಹಾರದ ಅಗತ್ಯಗಳನ್ನು ಪೂರೈಸಲು ಈ ಕ್ರಮ ಕೈಗೊಂಡಿರುವುದಾಗಿ ಜರ್ಮನ್ ಕಂಪನಿ ತಿಳಿಸಿದೆ.