
ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಆಟದ ಬಗ್ಗೆ ಕೇಳಿಬರುತ್ತಿರುವ ಗದ್ದಲವನ್ನು ಬದಿಗಿಟ್ಟು ಲಯಕ್ಕೆ ಮರಳಬೇಕೆಂದು ಅಮೆರಿಕದ ಗ್ರ್ಯಾಂಡ್ಮಾಸ್ಟರ್ ಹಿಕಾರು ನಕಮುರಾ ಸಲಹೆ ನೀಡಿದ್ದಾರೆ.
2024ರಲ್ಲಿ ವಿಶ್ವ ಚಾಂಪಿಯನ್ಷಿಪ್ ಗೆದ್ದ ನಂತರ ಗುಕೇಶ್ ಅವರು ನಾರ್ವೆ ಚೆಸ್ ಮತ್ತು ಚೆನ್ನೈ ಜಿಎಂ ಟೂರ್ನಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದರು.
ಹಲವು ಪಂದ್ಯಗಳಲ್ಲಿ ಗೆಲುವಿಗೆ ಕೈಹಾಕುವ ಬದಲು ಡ್ರಾಕ್ಕೆ ಒಲವು ತೋರಿಸಬಹುದಿತ್ತು ಎಂದು ನಕಮುರಾ ಅವರು ಗುಕೇಶ್ ಅವರ ಆಟದ ಶೈಲಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.