
ಸ್ವಾತಂತ್ರ್ಯ ದಿನಾಚರಣೆಯಂದು HMT ಕಂಪನಿಯ ವಿಶೇಷ ಆವೃತ್ತಿಯ ಗಡಿಯಾರಗಳ ಮಾರಾಟದಿಂದ ಒಂದೇ ದಿನ ₹35 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ.
ಗಡಿಯಾರ ಖರೀದಿಸಲು ಗ್ರಾಹಕರು ಎರಡು ಕಿಲೋಮೀಟರ್ಗೂ ಹೆಚ್ಚು ಉದ್ದದ ಸಾಲಿನಲ್ಲಿ ನಿಂತಿದ್ದರು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಕಂಪನಿಯನ್ನು ಪುನಶ್ಚೇತನಗೊಳಿಸಲು ಯೋಜನಾ ಆಯೋಗದ ಸದಸ್ಯ ವಿ.ಕೆ. ಸಾರಸ್ವತ್ ನೇತೃತ್ವದ ಸಮಿತಿ ಶಿಫಾರಸುಗಳನ್ನು ನೀಡಿದ್ದು, ವಿತ್ತ ಸಚಿವರೊಂದಿಗೆ ಚರ್ಚಿಸಲಾಗಿದೆ.