
ಮೈಸೂರು ಜಂಬೂಸವಾರಿಗೂ ಮುನ್ನವೇ ಕೊಪ್ಪಳ ಜಿಲ್ಲೆಯ ಗಂಗಾವತಿಯ ಹೇಮಗುಡ್ಡದಲ್ಲಿ ಆಯುಧ ಪೂಜೆಯ ದಿನವಾದ ಅಕ್ಟೋಬರ್ 20ರಂದು ಅದ್ಧೂರಿಯಾಗಿ ಜಂಬೂಸವಾರಿ ಜರುಗಿತು.
ಮೈಸೂರು ದಸರಾಗೆ ಕೊಪ್ಪಳವೇ ಮೂಲ ಎಂಬ ಪ್ರತೀತಿ ಇದ್ದು, ಪ್ರತಿವರ್ಷದಂತೆ ಈ ಬಾರಿಯೂ ಹೇಮಗುಡ್ಡದಲ್ಲಿ ಆನೆಯ ಮೇಲೆ ದುರ್ಗಾದೇವಿ ವಿಗ್ರಹವಿಟ್ಟು ಮೆರವಣಿಗೆ ನಡೆಸಲಾಯಿತು.
ಮೈಸೂರಿನ ಜಂಬೂಸವಾರಿಗೆ ಒಂದು ದಿನ ಮುಂಚಿತವಾಗಿ ನಡೆದ ಈ ವೈಭವದ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.