
ಬಾಲಿವುಡ್ ನಟ ಸನ್ನಿ ಡಿಯೋಲ್ ಅಭಿನಯದ ಎಂ. ಪದ್ಮಕುಮಾರ್ ನಿರ್ದೇಶನದ 'ಸೂರ್ಯ' ಕ್ರೈಮ್ ಥ್ರಿಲ್ಲರ್ ಸಿನಿಮಾ ನವೆಂಬರ್ 20ರಂದು ತೆರೆಗೆ ಬರಲಿದೆ.
ಈ ಸಿನಿಮಾದ ಟೀಸರ್ನಲ್ಲಿ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ಭ್ರಷ್ಟರೆಂದು ಬಿಂಬಿಸಿ ಅವರ ಮೇಲಿನ ಹಿಂಸಾಚಾರವನ್ನು ವೈಭವೀಕರಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಆರೋಪಿಸಿದೆ.
ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿರುವ ಸಂಘವು, ಚಿತ್ರದ ತುರ್ತು ಪರಾಮರ್ಶೆಗೆ ಹಾಗೂ ಅಗತ್ಯ ಕ್ರಮಕ್ಕೆ ಒತ್ತಾಯಿಸಿದೆ.