
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ 10,783 ಕೋಟಿ ರೂಪಾಯಿ ವೆಚ್ಚದ ಮೂರು ಪ್ರಮುಖ ರೈಲ್ವೆ ವಿಸ್ತರಣಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಈ ಯೋಜನೆಗಳ ಮೂಲಕ ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ 656 ಕಿ.ಮೀ ಹೊಸ ರೈಲು ಮಾರ್ಗ ನಿರ್ಮಾಣವಾಗಲಿದ್ದು, 2029-30ನೇ ಹಣಕಾಸು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಈ ವಿಸ್ತರಣೆಯಿಂದ ವಾರ್ಷಿಕ 27 ಮಿಲಿಯನ್ ಟನ್ಗಳಷ್ಟು ಹೆಚ್ಚುವರಿ ಸರಕು ಸಾಗಣೆಗೆ ಅವಕಾಶ ಸಿಗಲಿದ್ದು, 14 ಜಿಲ್ಲೆಗಳ 4,790 ಹಳ್ಳಿಗಳ 56 ಲಕ್ಷ ಜನರಿಗೆ ನೇರ ಪ್ರಯೋಜನ ಲಭಿಸಲಿದೆ.