
ರಾಜ್ಯದ ಸರ್ಕಾರಿ ಶಾಲೆಗಳು ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಬಹುತೇಕ ಕಡೆ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಣೆಯಾಗಿಲ್ಲ ಹಾಗೂ ಕೆಲವೆಡೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ನೀಡಲಾಗಿದೆ.
ಉತ್ತರ ಕನ್ನಡದ ಮುಂಡಗೋಡಿನಲ್ಲಿ ಕಳಪೆ ಶೂಗಳನ್ನು ಪೋಷಕರು ಮತ್ತು ವಿದ್ಯಾರ್ಥಿಗಳು ಶಾಲೆಯ ಮುಂದೆಯೇ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ಮತ್ತು ಕಲಬುರಗಿಯಲ್ಲೂ ಕಳಪೆ ಶೂಗಳನ್ನು ವಿತರಿಸಲಾಗಿದ್ದು, ಅವುಗಳನ್ನು ವಾಪಸ್ ಕಳುಹಿಸುವುದಾಗಿ ಎಸ್‌ಡಿಎಂಸಿ ಎಚ್ಚರಿಕೆ ನೀಡಿದೆ.