
ಬೆಂಗಳೂರಿನಲ್ಲಿ ಕಸ, ರಸ್ತೆ ಗುಂಡಿ, ಒತ್ತುವರಿ ಮತ್ತು ಇತರ ಸಮಸ್ಯೆಗಳನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
AI ಕ್ಯಾಮೆರಾ ಅಳವಡಿಸಿದ ವಾಹನವು ರಸ್ತೆಗಳ ಸಮೀಕ್ಷೆ ನಡೆಸಿ, ಸಮಸ್ಯೆಗಳನ್ನು ಗುರುತಿಸಿ ಸ್ವಯಂಚಾಲಿತವಾಗಿ ಟಿಕೆಟ್ ನಂಬರ್ ಸೃಷ್ಟಿಸುತ್ತದೆ.
ಪತ್ತೆಯಾದ ಸಮಸ್ಯೆಗಳನ್ನು 10 ದಿನದೊಳಗೆ ಪರಿಹರಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು ಮಾರ್ಷಲ್ಗಳಿಗೆ ಸೂಚನೆ ನೀಡಿದ್ದಾರೆ.