
ಕರ್ನಾಟಕದಲ್ಲಿ ಹೊಸದಾಗಿ ಒಂಬತ್ತು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಒಟ್ಟು ಬರಪೀಡಿತ ತಾಲ್ಲೂಕುಗಳ ಸಂಖ್ಯೆ 226ಕ್ಕೆ ಏರಿಕೆಯಾಗಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಒಟ್ಟು ನಷ್ಟದ ಮೊತ್ತ 60,000 ಕೋಟಿ ರೂ.ಗಳಿಂದ 70,000 ಕೋಟಿ ರೂ.ವರೆಗೆ ತಲುಪಬಹುದು ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ.
ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಅಂದಾಜು 18,000 ಕೋಟಿಯಿಂದ 20,000 ಕೋಟಿ ರೂ.ವರೆಗೆ ಪರಿಹಾರ ಕೋರಬೇಕಾಗಬಹುದು ಎಂದು ತಿಳಿಸಿರುವ ಅವರು, ಕೇಂದ್ರಕ್ಕೆ ಮನವಿ ಸಲ್ಲಿಸಲು ಸರ್ವಪಕ್ಷ ನಿಯೋಗ ಕೊಂಡೊಯ್ಯುವುದಾಗಿ ಹೇಳಿದರು.