ಗೂಗಲ್ ಸಂಸ್ಥೆಯು ಜೆಮಿನಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಆಧಾರಿತ ತನ್ನ ಹೊಸ 'ಪಿಕ್ಸೆಲ್ 11' ಸ್ಮಾರ್ಟ್ಫೋನ್ ಸರಣಿಯನ್ನು ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಮಧ್ಯರಾತ್ರಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಹೊಸ Tensor G6 ಚಿಪ್ ಹೊಂದಿರುವ ಈ ಸರಣಿಯಲ್ಲಿ ಪಿಕ್ಸೆಲ್ 11, ಪಿಕ್ಸೆಲ್ 11 ಪ್ರೊ, ಪ್ರೊ ಎಕ್ಸ್ಎಲ್ ಮತ್ತು ಪಿಕ್ಸೆಲ್ 11 ಪ್ರೊ ಫೋಲ್ಡ್ ಎಂಬ ನಾಲ್ಕು ಮಾದರಿಗಳನ್ನು ಪರಿಚಯಿಸಲಾಗಿದೆ.
ಈ ಫೋನ್ಗಳ ಆರಂಭಿಕ ಬೆಲೆ ₹90,000 ದಿಂದ ಆರಂಭವಾಗಿ ಫೋಲ್ಡಬಲ್ ಮಾದರಿಗೆ ₹1.86 ಲಕ್ಷದವರೆಗೆ ಇರಲಿದ್ದು, ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಲಿರುವ ಆ್ಯಪಲ್ ಐಫೋನ್ಗೆ ಇದು ತೀವ್ರ ಪೈಪೋಟಿ ನೀಡುವ ನಿರೀಕ್ಷೆಯಿದೆ.