
ಕಳೆದ 35 ವರ್ಷಗಳಿಂದ ಲೆಕ್ಕಪರಿಶೋಧನೆ ನಡೆಸದ ಕೂಡಲಸಂಗಮ ಮಂಡಳಿಯ ಅಧಿಕಾರಿಗಳನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರಾದ 744 ಕೋಟಿ ರೂ.ಗಳಲ್ಲಿ 480 ಕೋಟಿ ರೂ. ಖರ್ಚಾಗಿದ್ದು, 17 ಸ್ಮಾರಕಗಳ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಬನವಾಸಿ ಅಭಿವೃದ್ಧಿಗಾಗಿ 50 ಕೋಟಿ ರೂ. ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಯಾವುದೇ ಕಾಮಗಾರಿಗೆ ಹಣ ಖರ್ಚು ಮಾಡುವ ಮುನ್ನ ಮಂಡಳಿಯ ಅನುಮೋದನೆ ಕಡ್ಡಾಯವೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.