
ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ವೇಳೆ ತಿನಿಸು ಕದ್ದು ಇರಿಸಿಕೊಂಡಿದ್ದ ಕಿರಣ್ ಶಾಸ್ತ್ರಿ ಮತ್ತು ಜಗದೀಶ್ ಅವರಿಗೆ ನಟ ಸುದೀಪ್ ಸ್ವತಃ ಶಿಕ್ಷೆ ಘೋಷಿಸಿದ್ದಾರೆ.
ಮುಂದಿನ ವಾರದವರೆಗೆ ಮನೆಗೆ ಯಾವುದೇ ತಿನಿಸು ಬಂದರೂ ಅವುಗಳನ್ನು ಕಿರಣ್ ಹಾಗೂ ಜಗದೀಶ್ ಅವರಿಗೆ ನೀಡುವಂತಿಲ್ಲ ಎಂದು ಸುದೀಪ್ ಆದೇಶಿಸಿದರು.
ಒಂದೊಮ್ಮೆ ಇಬ್ಬರೂ ಮತ್ತೆ ಕಳ್ಳತನ ಮಾಡಿದರೆ ನೇರವಾಗಿ ನಾಮಿನೇಟ್ ಆಗಲಿದ್ದಾರೆ ಎಂದು ಎಚ್ಚರಿಕೆ ನೀಡಿರುವ ಸುದೀಪ್, ದಿನಸಿ ಸಾಮಾಗ್ರಿಗಳನ್ನೂ ಪ್ರತ್ಯೇಕವಾಗಿ ಇಡುವಂತೆ ಸೂಚಿಸಿದ್ದಾರೆ.