
ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಡೇವಿಡ್ ಮಿಲ್ಲರ್, 2013ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಬಾರಿಸಿದ ಅಜೇಯ 101 ರನ್‌ಗಳ ಇನ್ನಿಂಗ್ಸ್ ತಮ್ಮ ವೃತ್ತಿಜೀವನದ ಅತ್ಯಂತ ತೃಪ್ತಿದಾಯಕ ಸಾಧನೆ ಎಂದಿದ್ದಾರೆ.
ದಿ ಹಂಡ್ರೆಡ್ 2026 ಟೂರ್ನಿಯಲ್ಲಿ ಸದರ್ನ್ ಬ್ರೇವ್ ಪರ ಆಡುತ್ತಿರುವ 37 ವರ್ಷದ ಮಿಲ್ಲರ್, ಅಂದು ಕಿಂಗ್ಸ್ XI ಪಂಜಾಬ್ ಪರ ಕೇವಲ 38 ಎಸೆತಗಳಲ್ಲಿ ಅಜೇಯ ಶತಕ ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದನ್ನು ಸ್ಮರಿಸಿದ್ದಾರೆ.
ಐಪಿಎಲ್‌ನಲ್ಲಿ ಒಟ್ಟು 152 ಪಂದ್ಯಗಳನ್ನು ಆಡಿ 3,288 ರನ್ ಗಳಿಸಿರುವ ಮಿಲ್ಲರ್, 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡದೊಂದಿಗೆ ಚಾಂಪಿಯನ್ ಪಟ್ಟಕ್ಕೇರಿದ ಕ್ಷಣವನ್ನು ತಮ್ಮ ನೆಚ್ಚಿನ ನೆನಪು ಎಂದು ಹಂಚಿಕೊಂಡಿದ್ದಾರೆ.