
ದೆಹಲಿಯಲ್ಲಿ ಬಸ್ ನಿಲುಗಡೆ ಇಲ್ಲದ ಸ್ಥಳದಲ್ಲಿ ಬಸ್ ನಿಲ್ಲಿಸಲು ನಿರಾಕರಿಸಿದ ಚಾಲಕನೊಂದಿಗೆ ಮಹಿಳಾ ಪ್ರಯಾಣಿಕರೊಬ್ಬರು ತೀವ್ರ ವಾಗ್ವಾದ ನಡೆಸಿರುವ ಘಟನೆ ವರದಿಯಾಗಿದೆ.
ಸಿಟ್ಟಿಗೆದ್ದ ಮಹಿಳೆ ಚಾಲಕನ ಕಾಲರ್ ಹಿಡಿದು ಬೆದರಿಕೆ ಹಾಕಿರುವುದು ಹಾಗೂ ಚಲಿಸುತ್ತಿದ್ದ ಬಸ್ನ ಸ್ಟೇರಿಂಗ್ ವೀಲ್ಗೆ ಕೈಹಾಕಿ ಅಡ್ಡಿಪಡಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾರ್ವಜನಿಕ ಸಾರಿಗೆಯಲ್ಲಿ ಈ ರೀತಿಯ ಅಪಾಯಕಾರಿ ವರ್ತನೆಯು ಚಾಲಕ ಹಾಗೂ ಸಹ ಪ್ರಯಾಣಿಕರ ಜೀವಕ್ಕೆ ಕುತ್ತು ತರುವುದರಿಂದ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.