
ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಚಳಿಗಾಲದ ವೇಳಾಪಟ್ಟಿಯಡಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸದಾಗಿ 5 ಮಾರ್ಗಗಳಿಗೆ ವಿಮಾನ ಸೇವೆಗಳನ್ನು ವಿಸ್ತರಿಸುವುದಾಗಿ ಘೋಷಿಸಿದೆ.
ಹೊಸ ವೇಳಾಪಟ್ಟಿಯ ಪ್ರಕಾರ ಬೆಂಗಳೂರಿನಿಂದ ನೇಪಾಳದ ಕಠ್ಮಂಡು ನಗರಕ್ಕೆ ನೇರ ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಆರಂಭವಾಗಲಿದೆ.
ಕೊಯಮತ್ತೂರು, ಗೋವಾ (ಮೋಪಾ), ಜೋಧ್‌ಪುರ್ ಹಾಗೂ ಮಧುರೈ ನಗರಗಳಿಗೆ ಹೊಸದಾಗಿ ದೈನಂದಿನ ವಿಮಾನ ಸೇವೆಗಳನ್ನು ಆರಂಭಿಸಲಾಗುತ್ತಿದೆ.