
ಮೈಸೂರಿನಲ್ಲಿ ಆಗಸ್ಟ್ 24ರಿಂದ 26ರವರೆಗೆ ನಡೆದ ಮೂರು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಬುಡಕಟ್ಟು ಭಾಷೆಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣದ ಕುರಿತು ಚರ್ಚೆ ನಡೆಸಲಾಯಿತು.
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು 'ಆದಿ ವಾಣಿ' ಆ್ಯಪ್ನ ಹೊಸ ಐಒಎಸ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಹೊಸದಾಗಿ 5 ಭಾಷೆಗಳನ್ನು ಸೇರ್ಪಡೆಗೊಳಿಸಲಾಗಿದೆ.
ಸಮಾವೇಶದಲ್ಲಿ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (CIIL) ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಬುಡಕಟ್ಟು ಭಾಷೆಗಳ ಮಾಹಿತಿಗಾಗಿ ವಿಶೇಷ ಚಾಟ್ಬಾಟ್ ಅನ್ನು ಪರಿಚಯಿಸಲಾಗಿದೆ.