
ಮಳೆಗಾಲದಲ್ಲಿ ಸೋಂಕುಗಳು ಮತ್ತು ಸೊಳ್ಳೆಗಳಿಂದ ಹರಡುವ ರೋಗಗಳ ಅಪಾಯ ಹೆಚ್ಚಿರುವುದರಿಂದ ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು ಎಂದು ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ಡಾ. ಅನುಷಾ ಎಂ ತಿಳಿಸಿದ್ದಾರೆ.
ಗರ್ಭಿಣಿಯರು ಕಲುಷಿತ ನೀರು ಮತ್ತು ಆಹಾರದಿಂದ ದೂರವಿರಲು ದಿನಕ್ಕೆ 2 ರಿಂದ 3 ಲೀಟರ್ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು ಹಾಗೂ ತಾಜಾ ಮತ್ತು ಚೆನ್ನಾಗಿ ಬೇಯಿಸಿದ ಆಹಾರವನ್ನೇ ಸೇವಿಸಬೇಕು.
ಡೆಂಗ್ಯೂ ಮತ್ತು ಮಲೇರಿಯಾದಿಂದ ರಕ್ಷಿಸಿಕೊಳ್ಳಲು ಪೂರ್ಣ ತೋಳಿನ ಬಟ್ಟೆ ಧರಿಸುವುದು, ಜಾರಿ ಬೀಳದಂತೆ ಉತ್ತಮ ಪಾದರಕ್ಷೆಗಳನ್ನು ಬಳಸುವುದು ಮತ್ತು ಜ್ವರ ಅಥವಾ ವಾಂತಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿದೆ.