
ಭಾರತವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದರೂ, ಸಾಮಾನ್ಯ ಜನರ ಜೀವನಮಟ್ಟ ಮತ್ತು ಮೂಲಸೌಕರ್ಯಗಳು ಸುಧಾರಿಸುತ್ತಿಲ್ಲ ಎಂದು ಆಸ್ಟ್ರಿಯಾದ ವಾಣಿಜ್ಯ ಸಲಹೆಗಾರ ವೋಲ್ಫ್‌ಗ್ಯಾಂಗ್ ಬರ್ಗ್‌ಥಾಲರ್ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ 22 ವರ್ಷಗಳಿಂದ ಭಾರತವನ್ನು ಗಮನಿಸುತ್ತಿರುವ ಬರ್ಗ್‌ಥಾಲರ್, ದೇಶದಲ್ಲಿ ಮಿಲಿಯನೇರ್‌ಗಳ ಸಂಖ್ಯೆ ಹೆಚ್ಚುತ್ತಿದ್ದರೂ ಶುದ್ಧ ಗಾಳಿ, ನೀರು ಮತ್ತು ಆರೋಗ್ಯಕರ ಆಹಾರದ ಕೊರತೆ ಕಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಡಿಪಿ ಏರಿಕೆ ಮತ್ತು ಷೇರು ಮಾರುಕಟ್ಟೆಯ ಜಿಗಿತದ ನಡುವೆ, ಭಾರತೀಯರು ತಮ್ಮ ಆರೋಗ್ಯ ಮತ್ತು ಮಾನವ ಸಂಬಂಧಗಳ ವ್ಯಾಪಾರೀಕರಣದ ಮೂಲಕ ದೊಡ್ಡ ಬೆಲೆ ತೆರುತ್ತಿದ್ದಾರೆ ಎಂದು ಅವರು ಎಕ್ಸ್ ವೇದಿಕೆಯಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.