Economy
ಎಲ್‌ ಆ್ಯಂಡ್ ಟಿ ಕಂಪನಿಯ ಜೂನ್ ತ್ರೈಮಾಸಿಕ ಲಾಭ ₹4,122 ಕೋಟಿ

ಎಲ್‌ ಆ್ಯಂಡ್ ಟಿ ಕಂಪನಿಯ ಜೂನ್ ತ್ರೈಮಾಸಿಕ ಲಾಭ ₹4,122 ಕೋಟಿ

prajavani2h
THE BRIEF
1

ಲಾರ್ಸೆನ್ ಆ್ಯಂಡ್ ಟೊಬ್ರೊ ಕಂಪನಿಯು ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹4,122 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 14ರಷ್ಟು ಏರಿಕೆ ಕಂಡಿದೆ.

2

ಕಂಪನಿಯ ವರಮಾನವು ₹67,941 ಕೋಟಿಗೆ ಏರಿಕೆಯಾಗಿದ್ದು, ಜೂನ್ 30ರ ವೇಳೆಗೆ ಕಂಪನಿಯ ಬಳಿ ಇರುವ ಒಟ್ಟು ಕಾರ್ಯಾದೇಶಗಳ ಮೌಲ್ಯವು ₹7.78 ಲಕ್ಷ ಕೋಟಿಗಳಷ್ಟಿದೆ.

3

ಜಾಗತಿಕ ರಾಜಕೀಯ ಅನಿಶ್ಚಿತತೆಗಳ ನಡುವೆಯೂ ಕಂಪನಿಯು ಈ ತ್ರೈಮಾಸಿಕದಲ್ಲಿ ₹1.08 ಲಕ್ಷ ಕೋಟಿ ಮೌಲ್ಯದ ಹೊಸ ಕಾರ್ಯಾದೇಶಗಳನ್ನು ಪಡೆದಿದ್ದು, ಇದು ಕಳೆದ ವರ್ಷಕ್ಕಿಂತ ಶೇ 14ರಷ್ಟು ಅಧಿಕವಾಗಿದೆ.