
ಕ್ಷೇತ್ರ ಮರುವಿಂಗಡಣೆ ನಡೆದು ಮಧುಗಿರಿ ಕ್ಷೇತ್ರ ರಚನೆಯಾದರೆ ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ಮಹಿಳಾ ಮೀಸಲಾತಿ ವಿಧೇಯಕವನ್ನು ತಾವು ಬೆಂಬಲಿಸುವುದಾಗಿ ಅವರು ತಿಳಿಸಿದ್ದು, ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಯಾವುದೇ ವಿಧೇಯಕ ಅಂಗೀಕರಿಸುವುದು ಕಷ್ಟವಲ್ಲ ಎಂದಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅಹಿಂದದ ಪ್ರಶ್ನಾತೀತ ನಾಯಕರೆಂದು ಹೇಳಿರುವ ರಾಜಣ್ಣ, ಅವರು ಬಲವಾಗಿದ್ದರೆ ಪಕ್ಷವೂ ಬಲವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.